ನಿಮ್ಮ ಗಣಕದಲ್ಲಿ ನುಡಿ ಕನ್ನಡ ( ತಂತ್ರಾಂಶ ) ಇದೆಯೇ ?
ನೀವು ಈಗಾಗೆಲೇ ಕನ್ನಡವನ್ನು ಲಿಪಿಯನ್ನು ಮೊಬೈಲ್ ನಲ್ಲಿ ಬಳಸುತಿದ್ದೀರಿ, ಆದರೆ, ನಿಮ್ಮ ಗಣಕದಲ್ಲಿ ಉಪಯೋಗಿಸಿದ್ದೀರಾ?
ನಿಮಗಾಗಿ ಕನ್ನಡ ಗಣಕ ಪರಿಷತ್ತು ಕನ್ನಡ ಕೀಲಿಮಣೆ ವಿನ್ಯಾಸ ಮತ್ತು ಕನ್ನಡ ಲಿಪಿ ತಂತ್ರಾಂಶ ಸಿದ್ಧಗೊಳಿಸಿದೆ . ಅಲ್ಲದೆ ಇದಕ್ಕೆ ಕರ್ನಾಟಕ ಸರ್ಕಾರದ ಅಧಿಕೃತ ಮಾನ್ಯತೆ ಕೂಡ ಸಿಕ್ಕಿದೆ.
ಇದನ್ನು ಉಚಿತವಾಗಿ ಪಡೆಯುವುದು ಹೇಗೆ ?
ಈ ಲಿಪಿಯನ್ನು MS-ವರ್ಡ್, ಎಕ್ಸೆಲ್, ನೋಟ್ ಪ್ಯಾಡ್ ನಲ್ಲಿ ಬಳಸುವುದು ಹೇಗೆ?
ಇದನ್ನು ತಿಳಿದು, ಪಡೆದು, ಉಪಯೋಗಿಸೋಣ ಬನ್ನಿ .
ನಿಮ್ಮ ಗಣಕದಲ್ಲಿ ಕನ್ನಡ ನುಡಿ ತಂತ್ರಾಂಶ ಸೇರಿಸಲು ಈ ಕೆಳಗಿನ ಹೆಜ್ಜೆಗಳನ್ನು ಅನುಸರಿಸಿರಿ..
೧. ಈ ಕೆಳಗಿನ ಲಿಂಕ್ ಅನ್ನು ಒತ್ತಿ
೨. "ತಂತ್ರಾಂಶಗಳು" ಆಯ್ಕೆ ಮಾಡಿ (ಚಿತ್ರ ೧ ನ್ನು ನೋಡಿ )
೩. ನುಡಿ ಉಚಿತ ತಂತ್ರಾಂಶದಲ್ಲಿ "ನುಡಿ 6.0 " ಆಯ್ಕೆ ಮಾಡಿ
೪. ಡೌನ್ಲೋಡ್ ಆಗಿರುವ ತಂತ್ರಾಂಶವನ್ನು Install ಮಾಡಿ
ನಿಮಗಿದು ತಿಳಿದಿರಲಿ :
ಈ ಕನ್ನಡ ತಂತ್ರಾಂಶವನ್ನು ನೀವು ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ನೋಟ್ ಪ್ಯಾಡ್ ನಲ್ಲೂ ಬಳಸಬಹುದು. (ಚಿತ್ರ 3 ನ್ನು ನೋಡಿ )
1. ಮೊದಲು ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್, ನೋಟ್ ಪ್ಯಾಡ್ ತೆಗೆಯಿರಿ
2. ಕನ್ನಡದ ಅಕ್ಷರವನ್ನು (ಫಾಂಟ್) ಆಯ್ಕೆ ಮಾಡಿ
3. ನಂತರ ಧನ್ಯವಾದ ಶೈಲೇಂದ್ರ ಎಂದು ಬರೆದು ಕಳಿಸಿ 🤣
ಚಿತ್ರ ೧
ಚಿತ್ರ 2
ಚಿತ್ರ 3
ಕನ್ನಡವನ್ನು ನಿಮ್ಮ ಗಣಕದಲ್ಲಿ ( ಮಾತ್ರವಲ್ಲದೆ ತನು, ಮನದಲ್ಲೂ ) ಸೇರಿಸಿರುವುದ್ದಕ್ಕಾಗಿ ಧನ್ಯವಾದ 🙏
ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ

